ರಘುಪತಿ ರಾಘವ ರಾಜಾರಾಮ್ lyrics

ರಘುಪತಿ ರಾಘವ ರಾಜಾರಾಮ್ lyrics

ಹಾಡು: ರಘುಪತಿ ರಾಘವ

ರಚನೆ: ಚಿ. ಸದಾಶಿವಯ್ಯ
ಸಂಗೀತ: ಸತ್ಯಂ
ಗಾಯನ: ಪಿ. ಬಿ. ಶ್ರೀನಿವಾಸ್, ಎಸ್.‌ ಜಾನಕಿ‌
ಚಲನಚಿತ್ರ: ಗಾಂಧಿನಗರ
 
ರಘುಪತಿ ರಾಘವ ರಾಜಾರಾಮ್‌
ಪತಿತ ಪಾವನ ಸೀತಾರಾಮ್{೨}
 
ನಿನ್ನಯ ಪಾವನ ಪುಣ್ಯನಾಮ
ನೆನೆಯುವ ದಿನವೆ ಶುಭದಿನವು{೨}

ನಿನ್ನಯ ಅಮೃತ ನುಡಿಗಳ ಮನದಿ
ಸ್ಮರಿಸದ ಕ್ಷಣವೇ ಮಂಗಳವು
 
ರಘುಪತಿ ರಾಘವ ರಾಜಾರಾಮ್‌
ಪತಿತ ಪಾವನ ಸೀತಾರಾಮ್
ಹೋ ಪತಿತ ಪಾವನ ಸೀತಾರಾಮ್
 
ಭಾರತ ಮಾತೆಯ ಕೋಟಿ ವರುಷಗಳ
ತಪಸ್ಸು ನೀಡಿದ ಫಲ ನೀನು{೨}
 
ಭಾರತೀಯರ ದಾಸ್ಯ ಹರಿಸಲು
ದೇವನು ತಂದ ವರ ನೀನು
 
ರಘುಪತಿ ರಾಘವ ರಾಜಾರಾಮ್‌
ಪತಿತ ಪಾವನ ಸೀತಾರಾಮ್
ಹೋ ಪತಿತ ಪಾವನ ಸೀತಾರಾಮ್
 
ದ್ವೇಷ ಅಸೂಯೆ ಭೇದ ಭಾವವ
ತೊರೆಯಿರೆಂದು ಉಪದೇಶಿಸಿದೆ{೨}
 
ಸತ್ಯ ಅಹಿಂಸೆಯ ವ್ರತದ ಮಹಿಮೆಯ
ಜಗಕೆಲ್ಲ ನೀ ತೋರಿಸಿದೆ
 
ರಘುಪತಿ ರಾಘವ ರಾಜಾರಾಮ್‌
ಪತಿತ ಪಾವನ ಸೀತಾರಾಮ್{೨}

ಪತಿತ ಪಾವನ ಸೀತಾರಾಮ್(೨)  


Leave a Reply